ತುಮಕೂರು, ಜ.02 (DaijiworldNews/PY): ತಮ್ಮ ತೋಟದಿಂದ ಮೂರು ತೆಂಗಿನಕಾಯಿಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಯುವಕನನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆ ತುರುವೇಕೆರೆ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ.
ತೆಂಗಿನ ತೋಟದ ಮಾಲೀಕ ರಾಜು ಎನ್ನುವವರು ಹರೀಶ್ ಎಂಬವರಿಗೆ ಥಳಿಸಿದ್ದಾರೆ.
ರಾಜು ಅವರ ತೋಟದಿಂದ ಹರೀಶ್ ಮೂರು ತೆಂಗಿನಕಾಯಿ ಕದ್ದಿದ್ದಾರೆ ಎಂದು ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ತೆಂಗಿನಕಾಯಿ ಸರವನ್ನು ಕೊರಳಿಗೆ ಹಾಕಿ ಮನಸೋ ಇಚ್ಛೆ ಥಳಿಸಿದ್ಧಾನೆ ಎನ್ನಲಾಗಿದೆ. ಘಟನೆಯಲ್ಲಿ ಹರೀಶ್ಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಹರೀಶ್ನ ತಂದೆ ಗಂಗಾಧರಯ್ಯ ಎನ್ನುವವರು ಈ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.