ಕುಪ್ವಾರ, ಜ.02 (DaijiworldNews/HR): ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಓರ್ವ ಪ್ರಜೆಯನ್ನು ಭಾರತೀಯ ಯೋಧರು ಹತ್ಯೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಗಡಿಯೊಳಗೆ ನುಸುಳಲು ಯತ್ನಿಸಿದ ವ್ಯಕ್ತಿಯನ್ನು ಪಾಕಿಸ್ತಾನದ ಮೊಹಮ್ಮದ್ ಸಬೀರ್ ಮಲ್ಲಿಕ್ ಎಂದು ಗುರುತಿಸಲಾಗಿದ್ದು, ಆತನಿಂದ ಎಕೆ-47 ರೈಫಲ್ ಮತ್ತು ಅಪಾರ ಪ್ರಮಾಣದ ಶಸಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ನಿಯಂತ್ರಣ ರೇಖೆಯುದ್ದಕ್ಕೂ ಉಭಯ ಸೇನೆಗಳ ನಡುವೆ ನಡೆಯುತ್ತಿರುವ ಕದನ ವಿರಾಮ ತಿಳುವಳಿಕೆಯ ಸಂಪೂರ್ಣ ಉಲ್ಲಂಘನೆ ಅಥವಾ ಪಾಕಿಸ್ತಾನ ಸೇನೆಯ ಗಡಿ ಕ್ರಿಯಾ ತಂಡ ಪ್ವಾರ ಜಿಲ್ಲೆಯ ಕೇರಾನ್ ವಲಯದಲ್ಲಿ ಒಳನುಸುಳಲು ಯತ್ನಿಸಿದ್ದು, ಭಾರತೀಯ ಸೈನಿಕರು ಗಡಿ ನುಸುಳುವಿಕೆ ವಿಫಲಗೊಳಿಸಿ ಉಗ್ರನನ್ನು ಹತ್ಯೆ ಮಾಡಿದ್ದಾರೆ.