ಜಿಂದ್, ಜ.02 (DaijiworldNews/HR): ಸೇನೆಯ ಹೆಲಿಕಾಪ್ಟರ್ವೊಂದು ಭಾನುವಾರ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ.
ನರ್ವಾಣ ಪಟ್ಟಣ ಸಮೀಪದ ಜನವಾಲ ಗ್ರಾಮದ ಮೈದಾನವೊಂದರಲ್ಲಿ ಇಳಿದಿರುವ ಹೆಲಿಕಾಪ್ಟರ್ನಲ್ಲಿ ಸೇನೆಯ ನಾಲ್ವರು ಸಿಬ್ಬಂದಿ ಇದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ಇನ್ನು ಈ ವಿಷಯ ತಿಳಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ತಿಳಿದು ಬಂದಿದೆ.