ಬೆಂಗಳೂರು, ಜ.02 (DaijiworldNews/PY): "ಜನರು ನಿರ್ಲಕ್ಷ್ಯ ವಹಿಸಿದ್ದಲ್ಲಿ ದೆಹಲಿ, ಮುಂಬೈ ಹಾಗೂ ಪಶ್ಚಿಮ ಬಂಗಾಳದ ರೀತಿ ಲಾಕ್ಡೌನ್ ಮಾಡಬೇಕಾಗುತ್ತದೆ" ಎಂದು ಆರ್ ಅಶೋಕ್ ತಿಳಿಸಿದ್ಧಾರೆ.
ಸಿಎಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊರೊನಾ ಮೂರನೇ ಅಲೆ ಕುರಿತು ಮತ್ತೊಮ್ಮೆ ಸಭೆ ಮಾಡುತ್ತಾರೆ. ಕೇಂದ್ರ ಸರ್ಕಾರ ಬೆಂಗಳೂರನ್ನು ರೆಡ್ ಜೋನ್ ಎಂದು ಹೇಳಿದೆ. ಹಾಗಾಗಿ ಸಿಎಂ ಮತ್ತೊಮ್ಮೆ ಸಭೆ ಕರೆದು ಕಠಿಣ ನಿಯಮಗಳ ಕುರಿತು ತೀರ್ಮಾನ ಮಾಡಬಹುದು. ತಜ್ಞರ ಸಮಿತಿ ನೀಡುವ ಸಲಹೆಗಳನ್ನು ಜಾರಿ ಮಾಡಲಾಗುತ್ತದೆ" ಎಂದಿದ್ದಾರೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಏನು ಮಾಡುತ್ತಾರೆ ಎನ್ನುವುದು ನಮಗೆ ಮುಖ್ಯವಲ್ಲ. ನಮಗೆ ಯಾವುದೇ ರ್ಯಾಲಿ ಅಥವಾ ಸಭೆಯ ಬಗ್ಗೆ ಯೋಚನೆ ಇಲ್ಲ. ಹಾಗಾಗಿ ಜನವರಿ 4 ಅಥವಾ 5ರಂದು ಸಭೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಬಿಗಿ ಟಫ್ ರೂಲ್ಸ್ ಜಾರಿ ಮಾಡುತ್ತೇವೆ" ಎಂದು ಹೇಳಿದ್ದಾರೆ.