ಇಂದೋರ್, ಜ.02 (DaijiworldNews/HR): ನಟ ವಿಕ್ಕಿ ಕೌಶಲ್ ಅವರು ಸಿನಿಮಾವೊಂದರ ಶೂಟಿಂಗ್ ವೇಳೆ ಬೈಕ್ನ ನಂಬರ್ ಪ್ಲೇಟ್ ಅನ್ನು ಕಾನೂನು ಬಾಹಿರವಾಗಿ ಬಳಸಿದ್ದಾರೆ ಎಂದು ಇಲ್ಲಿನ ನಿವಾಸಿಯೊಬ್ಬರು ಆರೋಪಿಸಿದ್ದು, ದೂರು ದಾಖಲಿಸಿದ್ದಾರೆ.
ವಿಕ್ಕಿ ಕೌಶಲ್ ಹಿಂದೆ ನಟಿ ಸಾರಾ ಅಲಿ ಖಾನ್ ಅವರು ಕುಳಿತು ಬೈಕ್ ಸವಾರಿ ಮಾಡುತ್ತಿರುವುದು ಈ ಚಿತ್ರದಲ್ಲಿ ಕಂಡುಬಂದಿದೆ.
ಈ ಕುರಿತು ದೂರುದಾರ ಜೈ ಸಿಂಗ್ ಯಾದವ್ ಮಾತನಾಡಿ, ಸಿನಿಮಾ ಸಿಕ್ವೆನ್ಸ್ನಲ್ಲಿ ಬಳಸಲಾದ ವಾಹನದ ಸಂಖ್ಯೆ ನನಗೆ ಸಂಬಂಧಿಸಿದ್ದು. ಇದು ಚಲನಚಿತ್ರ ಘಟಕಕ್ಕೆ ತಿಳಿದಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಇದು ಕಾನೂನುಬಾಹಿರವಾಗಿದೆ. ಅವರು ನನ್ನ ಸಂಖ್ಯೆಯನ್ನು ಬಳಸಲು ಸಾಧ್ಯವಿಲ್ಲ. ಈ ಬಗ್ಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ದೂರಿನ ಕುರಿತು ಪ್ರತಿಕ್ರಿಯಿಸಿದ ಇಂದೋರ್ನ ಬಂಗಂಗಾ ಪ್ರದೇಶದ ಸಬ್ಇನ್ಸ್ಪೆಕ್ಟರ್ ರಾಜೇಂದ್ರ ಸೋನಿ, "ಈ ಸಂಬಂಧ ನಮಗೆ ದೂರು ಬಂದಿದ್ದು, ಅಕ್ರಮವಾಗಿ ನಂಬರ್ ಪ್ಲೇಟ್ ಬಳಸಲಾಗಿದೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.