ಸುಕ್ಮಾ, ಜ.02 (DaijiworldNews/PY): ಛತ್ತೀಸ್ಗಡದ ಸುಕ್ಮಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ 44 ಮಂದಿ ನಕ್ಸಲರು ಶರಣಾಗಿದ್ದು, ಇದರಲ್ಲಿ 9 ಮಹಿಳೆಯರು ಸಹ ಸೇರಿದ್ದಾರೆ.
"ಇವರು ಕೆಳ ಹಂತದ ಕೇಡರ್ಗಲ್ಲಿ ಕೆಲಸ ಮಾಡುತ್ತಿದ್ದು, ಕಿಸ್ಟಾರಾಮ್, ಚಿಂತಾಲ್ನರ್ ಹಾಗೂ ಬೇಜಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು" ಎಂದು ಸುಕ್ಮಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಮಾಹಿತಿ ನೀಡಿದ್ಧಾರೆ.
"ಶರಣಾಗಿರುವ ನಕ್ಸಲರು ಸುಕ್ಮಾ ಜಿಲ್ಲೆಯ ಕರಿಗುಂಡಮ್ ಹಳ್ಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಪೊಲೀಸ್ ಕ್ಯಾಂಪ್ನಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಆಹಾರ, ವಸತಿ ಸೌಕರ್ಯ ನೀಡಲಾಗಿದೆ" ಎಂದಿದ್ದಾರೆ.
"44 ಮಂದಿ ನಕ್ಸಲರ ಪೈಕಿ ಮಡ್ಕಮ್ ದುಲಾ ಎನ್ನುವ ವ್ಯಕ್ತಿಗೆ ಸರ್ಕಾರ 2 ಲಕ್ಷ ಬಹುಮಾನ ಘೋಷಿಸಿತ್ತು. ಉಳಿದವು ನಕ್ಸಲ್ ಸೇನಾ ಘಟಕ ಹಾಗೂ ಸಾಂಸ್ಕೃತಿಕ ಘಟಕದಲ್ಲಿ ಸಕ್ರಿಯರಾಗಿದ್ದರು" ಎಂದು ಹೇಳಿದ್ಧಾರೆ.
"ಶರಣಾಗಿರುವ ನಕ್ಸಲರಿಗೆ ಸರ್ಕಾರದ ಯೋಜನೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ