ಚಿಕ್ಕಮಗಳೂರು, ಜ.02 (DaijiworldNews/HR): ನಮ್ಮ ಪಕ್ಷದವರೇ ನನ್ನ ವಿರುದ್ದ ಪಿತೂರಿ ನಡೆಸುತ್ತಿದ್ದಾರೆ. ನಾನು ಕಾಂಗ್ರೆಸ್ ಸೇರುತ್ತೇನೆಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾಂವತ. ಬಿಜೆಪಿ ಮುಖಂಡರು, ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಡಿದೆ. ನಾನು ಕಾಂಗ್ರೆಸ್ ಸೇರುವುದು ಸುಳ್ಳು, ಇದನ್ನು ಯಾರೂ ನಂಬುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಪುಟ ಪುನರ್ ರಚನೆ, ಬೋರ್ಡ್ ನೀಡುವ ಸಮಯದಲ್ಲಿ ಮಾತ್ರ ಅಪ್ರಚಾರ ಮಾಡಲಾಗುತ್ತದೆ. ಸಂಪುಟ ಪುನರ್ ರಚನೆ ಸಮಯದಲ್ಲಿ ಮಾತ್ರ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹೊರಬರುತ್ತದೆ. ನಾನು ಎಲ್ಲಿಯೂ ಬೋರ್ಡ್, ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಆದರೂ ಈ ರೀತಿ ಸುದ್ದಿ ಹೊರಬರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.