ಅಗರ್ತಲಾ, ಜ.02 (DaijiworldNews/PY): ತ್ರಿಪುರಾ ಮೂಲದ ತಂದೆ-ಮಗನ ಮೇಲೆ ಮಿಜೋರಾಂ ಪೊಲೀಸರು ಗುಂಡು ಹಾರಿಸಿದ್ದು, ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.
"ರಾಮುಹೈ ರಿಯಾಂಗ್ ಹಾಗೂ ಆತನ ಪುತ್ರ ರತೀಂದ್ರ ಕಾಂಚನಪುರದ ಉಪವಿಭಾಗದ ಸ್ಥಳೀಯರೊಂದಿಗೆ ನೆರೆ ರಾಜ್ಯಕ್ಕೆ ಕೃಷಿಗಾಗಿ ಬಂದಿದ್ದರು" ಎಂದು ಜಿಲ್ಲಾ ಎಸ್ಪಿ ಚಕ್ರವರ್ತಿ ಮಾಹಿತಿ ನೀಡಿದ್ದಾರೆ.
"ಮಿಜೋರಾಂ ಪೊಲೀಸರು ಶುಕ್ರವಾರ ಮಧ್ಯಾಹ್ನ ತಂದೆ ಹಾಗೂ ಮಗನ ಮೇಲೆ ಗುಂಡು ಹಾರಿಸಿದ್ದು, ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಸಹ ಮಿಜೋರಾಂಗ್ ಡ್ರಗ್ಸ್ನೊಂದಿಗೆ ಪ್ರವೇಶಿಸಿದ್ದರು" ಎಂದು ಮಿಜೋರಾಂ ಪೊಲೀಸರು ತಿಳಿಸಿದ್ಧಾರೆ.
"ರಾಮುಹೈ ರಿಯಾಂಗ್ ಪರಾರಿಯಾಗಿ ವಾಪಾಸ್ ತ್ರಿಪುರಾ ಸೇರಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆತನ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ಯುವಕ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಧರ್ಮನಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆರೋಗ್ಯ ಸ್ಥಿರವಾಗಿದೆ" ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಾಂಗ್ಮುನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತರಾಜ್ಯ ಗಡಿಗಳಿಗೆ ಹೆಚ್ಚಿನ ಪಡೆಯನ್ನು ರವಾನಿಸಲಾಗಿದೆ.