ನವದೆಹಲಿ, ಜ.02 (DaijiworldNews/HR): ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರೊಂದಿಗೆ ಮತ್ತೊಂದೆಡೆ ಓಮೈಕ್ರಾನ್ ಸ್ಫೋಟಗೊಳ್ಳುತ್ತಿದ್ದು, ದೇಶದಲ್ಲಿ 1525 ಜನರಲ್ಲಿ ಓಮೈಕ್ರಾನ್ ಸೋಂಕು ಪತ್ತೆಯಾಗಿದೆ.
ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 460 ಮಂದಿಯಲ್ಲಿ ಓಮೈಕ್ರಾನ್ ದೃಢಪಟ್ಟಿದೆ.
ಇನ್ನು ರೂಪಾಂತರಿ ವೈರಸ್ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 27,553 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 24 ಗಂಟೆಯಲ್ಲಿ 284 ಜನ ಬಲಿಯಾಗಿದ್ದಾರೆ.
ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 4,81,770 ಕ್ಕೆ ಏರಿಕೆಯಾಗಿದೆ.