ನವದೆಹಲಿ, ಜ.02 (DaijiworldNews/PY): ವಾಂಟೆಡ್ ಡ್ರಗ್ ಸ್ಮಗ್ಲರ್ ಓರ್ವನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದ ಘಟನೆ ನವದೆಹಲಿಯ ಇಂಧ್ರಪುರಿ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಘಟನೆಯಲ್ಲಿ ಇಬ್ಬರಿಗೆ ಗುಂಡು ತಾಗಿದ್ದು, ನಾಲ್ವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ಧಾರೆ.
ದೆಹಲಿ ಪೊಲೀಸರ ಪ್ರಕಾರ, ಇಂದ್ರಪುರಿಗೆ ನಾರ್ಕೋಟಿಕ್ಸ್ ತಂಡವು ಡ್ರಗ್ ಸ್ಮಗ್ಲರ್ ಧರಂವೀರ್ ಅಲಿಯಾಸ್ ಪಲ್ಲಾನನ್ನು ಬಂಧಿಸಲು ತೆರಳಿತ್ತು. ಈ ಸಂದರ್ಭ ಪಲ್ಲಾ ಮನೆಯಲ್ಲಿ ಇರಲಿಲ್ಲ. ತಂಡವು ಪಲ್ಲಾ ಮನೆಯಿಂದ ಹೊರಬಂದ ತಕ್ಷಣ, ಧರ್ಮವೀರ್ ಅಲಿಯಾಸ್ ಪಲ್ಲಾ ಹಾಗೂ ಸುಮಾರು 50-60 ಮಂದಿಯೊಂದಿಗೆ ದೊಣ್ಣೆ ಹಾಗೂ ಕಲ್ಲುಗಳನ್ನು ಹೊತ್ತು ತಂದರು. ಗುಂಪು ಏಕಾಏಕಿ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದು, ಕಲ್ಲು ತೂರಾಟ ನಡೆಸಿತು. ಅಲ್ಲದೇ, ಪೊಲೀಸರ ಮೇಲೆ ಗುಂಡು ಹಾರಿಸಿತು. ಈ ಸಂದರ್ಭ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಅವರು ಗಾಯಗೊಂಡಿದ್ಧಾರೆ.
ಘಟನೆಯಲ್ಲಿ ಇನ್ಸ್ಪೆಕ್ಟರ್ ಹಾಗೂ ಎಎಸ್ಐ ಶ್ರೇಣಿಯ ಅಧಿಕಾರಿಗಳು ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ಧಾರೆ. ಈ ವೇಳೆ ಧರಂವೀರ್ ಅಲಿಯಾಸ್ ಪಲ್ಲಾ ಪರಾರಿಯಾಗಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಅಮಿತ್ ಹಾಗೂ ಸೊಹೈಬ್ ಎಂದು ಗುರುತಿಸಲಾಗಿದೆ.