ಬೆಂಗಳೂರು, ಜ 01 (DaijiworldNews/MS): ನಿರ್ಮಾಣ ಹಂತದ ಕಟ್ಟಡದ ಕೆಲಸದ ವೇಳೆ ಜೆಸಿಬಿಗೆ ಕಂದಮ್ಮ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಗುವನ್ನು ಸಿಮಿಯಾನ್(3) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆಯಲ್ಲಿ ಜೆಸಿಬಿ ಚಾಲಕನ ಅಚಾತುರ್ಯದಿಂದಾಗಿ ಈ ಅವಘಡ ಸಂಭವಿಸಿದೆ.
ಮುಂಜಾನೆ 5 ಗಂಟೆ ಸುಮಾರಿಗೆ ತಂದೆ ಡೇವಿಡ್ ಮೂರು ವರ್ಷದ ಮಗು ಸಿಮಿಯಾನ್ ಕರೆದುಕೊಂಡು ಹೋಗುತ್ತಿದ್ದಾಗ ಹಿಮ್ಮುಖವಾಗಿ ಜೆಸಿಬಿ ಚಾಲನೆ ಮಾಡಿಕೊಂಡು ಬಂದಿರುವ ಚಾಲಕ ಮಗುವಿನ ಮೇಲೆ ಹತ್ತಿಸಿದ್ದಾನೆ ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಉಪ್ಪಾರ ಪೇಟೆ ಪೋಲಿಸ್ ಠಾಣಾ ಸಿಬ್ಬಂದಿಗಳು ಭೇಟಿ ನೀಡಿದ್ದು, ಜೆಸಿಬಿ ಚಾಲಕ ಶಂಕರ್ ನಾಯಕ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಗುವನ್ನು ಕಳೆದುಕೊಂಡು ತಾಯಿ ತಂದೆಯ ಅಕ್ರಂದ ಮುಗಿಲು ಮುಟ್ಟಿತ್ತು.