ಭಿವಾನಿ, ಜ 01 (DaijiworldNews/MS): ಹರಿಯಾಣದ ಭಿವಾನಿ ಜಿಲ್ಲೆಯ ತೋಷಮ್ ಬ್ಲಾಕ್ನಲ್ಲಿರುವ ದಡಮ್ ಗಣಿಗಾರಿಕೆ ವಲಯದಲ್ಲಿ ಅವಘಡ ಸಂಭವಿಸಿದೆ. ಗಣಿಗಾರಿಕೆ ಸಂದರ್ಭ ಭೂಕುಸಿತ ಉಂಟಾಗಿ ಗಣಿಗಾರಿಕೆಯಲ್ಲಿ ತೊಡಗಿದ್ದ ಸುಮಾರು 10 ರಿಂದ 15 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ 8.15ರ ಸುಮಾರಿಗೆ ಗಣಿಗಾರಿಕೆ ನಡೆಯುತ್ತಿದ್ದಾಗ ಭೂ ಕುಸಿತ ಎದುರಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಕೂಡಹನ್ನೆರಡು ವಾಹನಗಳು ಅವಶೇಷಗಳ ಅಡಿಯಲ್ಲಿ ಸಮಾಧಿಯಾಗಿವೆ.
ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು ಅರ್ಧ ಡಜನ್ ಪಾಪ್ಲ್ಯಾಂಡ್ ಯಂತ್ರಗಳು ಮತ್ತು ಡಂಪರ್ಗಳು ಹೂತುಹೋಗಿವೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.