ಬೆಂಗಳೂರು, ಜ.01 (DaijiworldNews/PY): "ಕೇಂದ್ರ ಸರ್ಕಾರದ ಗೋಬರ್ ಧನ್ ಯೋಜನೆ ಅಡಿಯಲ್ಲಿ ಗೋಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು" ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರದ ಗೋಬರ್ ಧನ್ ಯೋಜನೆಯನ್ನು ಗೋಶಾಲೆಗಳ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿದ್ದು, ರಾಜ್ಯದಲ್ಲೂ ಗೋಬರ್ ಧನ್ ಯೋಜನೆಯಡಿ ಗೋಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು" ಎಂದಿದ್ಧಾರೆ.
"ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶಗಳಲ್ಲಿ ಗೋಶಾಲೆಗಳಲ್ಲಿ ಗೋವುಗಳ ಸಗಣಿ ಹಾಗೂ ಮೂತ್ರದಿಂದ ಸುಮಾರು 100ಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಇದೇ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗುವುದು" ಎಂದು ಹೇಳಿದ್ದಾರೆ.