ನವದೆಹಲಿ, ಜ.01 (DaijiworldNews/PY): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರಿ ಅಂಜು ಸೆಹ್ವಾಗ್ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಅಂಜು ಸೆಹ್ವಾಗ್ ಅವರು ದೆಹಲಿಯಲ್ಲಿ ಕಾಂಗ್ರೆಸ್ನ ಮಾಜಿ ಕೌನ್ಸಿಲರ್ ಆಗಿದ್ದರು ಹಾಗೂ ಇವರು ವೃತ್ತಿಯಲ್ಲಿ ಶಿಕ್ಷಕಿಯೂ ಆಗಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿದ ಜನಪರ ಕೆಲಸಗಳಿಂದ ಪ್ರೇರಿರತರಾಗಿ ಅಂಜು ಸೆಹ್ವಾಗ್ ಅವರು ತಮ್ಮ ಎಲ್ಲಾ ಬೆಂಬಲಿಗರೊಂದಿಗೆ ಆಪ್ ಸೇರ್ಪಡೆಯಾಗಿದ್ಧಾರೆ ಎಂದು ಆಪ್ ಟ್ವೀಟ್ ಮಾಡಿದೆ.
2012ರಲ್ಲಿ ಅಂಜು ಸೆಹ್ವಾಗ್ ಅವರು ದೆಹಲಿಯಲ್ಲಿ ಎಂಸಿಡಿ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾದ ದಕ್ಷಿಣಪುರಿ ಎಕ್ಸ್ಟೆಂಷನ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರತಿ ಸ್ಪರ್ಧಿಯಾಗಿದ್ದ ಬಿಜೆಪಿ ಆರತಿ ದೇವಿಯನ್ನು 558 ಮತಗಳ ಅಂತರದಿಂದ ಸೋಲಿಸಿದ್ದರು.
ಲಕ್ಷ್ಮಣ ಪಬ್ಲಿಕ್ ಸ್ಕೂಲ್ನಲ್ಲಿ ಅಂಜು ಸೆಹ್ವಾಗ್ ಅವರು ಹಿಂದಿ ಶಿಕ್ಷಕಿಯಾಗಿದ್ದರು. ಕಾಂಟ್ರ್ಯಾಕ್ಟರ್ ರವೀಂದರ್ ಸಿಂಗ್ರನ್ನು ವಿವಾಹವಾಗಿದ್ದ ಅಂಜು ಬಳಿಕ 2000ದಲ್ಲಿ ನಜಾಫ್ಗಢದಿಂದ ಮದನ್ಗಿರಿಗೆ ಶಿಫ್ಟ್ ಆಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.