ಔರಂಗಾಬಾದ್, ಜ.01 (DaijiworldNews/PY): ಔರಂಗಾಬಾದ್ನ ಹರಿಹರಗಂಜ್ನ ರಾಷ್ಟ್ರೀಯ ಹೆದ್ದಾರಿ 98ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಆರು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಕಲೋಕುಮಾರಿ, ರೀಟಾ, ಬಸಂತಿ, ನೀಲಂ, ಅಪರ್ಣಾ, ಕಮಲೇಶ್ ಎಂದು ಗುರುತಿಸಲಾಗಿದೆ.
ಒಬ್ರಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಎರಡು ಪಿಕಪ್ ವ್ಯಾನ್ಗಳಲ್ಲಿ ಕಾರ್ಮಿಕರು ಬರುತ್ತಿದ್ದರು. ಈ ವೇಳೆ ಹರಿಹರಗಂಜ್ ಸಮೀಪ ನಿಯಂತ್ರಣ ತಪ್ಪಿದ ಟ್ರಕ್ವೊಂದು ಪಿಕಪ್ ವ್ಯಾನ್ಗೆ ಢಿಕ್ಕಿ ಹೊಡೆದು, ಪಲ್ಟಿಯಾಗಿದ್ದು, ವ್ಯಾನ್ನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ.
ಇವೆರೆಲ್ಲರೂ ಶಿಹುಡಿ ಗ್ರಾಮದಲ್ಲಿ ಭತ್ತದ ಕೊಯ್ಲು ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.