ನವದೆಹಲಿ, ಜ.01 (DaijiworldNews/PY): ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡಿದ್ಧಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ 2021ರ ಜನವರಿ 16ರಿಂದ ವಿವಿಧ ಗುಂಪಿನ ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ ಕೊರೊನಾ ಲಸಿಕಾಕರಣ ನಡೆಸಲಾಗಿದೆ. ಈ ನಡುವೆ ಮಕ್ಕಳಿಕೂ ಕೂಡಾ ಲಸಿಕೆ ನೀಡಬೇಲು ಎನ್ನುವ ಕೂಗು ಕೇಳಿಬಂದಿತ್ತು. ಇದೀಗ ಮಕ್ಕಳಿಗೂ ಜನವರಿ 3ರಿಂದ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ.
ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆಫ್ ಇಮ್ಯೂನಿಜೇಶನ್ ಶಿಫಾರಸು ಹಾಗೂ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 2022ರ ಜನವರಿ 3ರಿಂದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಹಾಗೂ ಶಾಸಕರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ಧಾರೆ.
ಭಾರತದಲ್ಲಿ ಸಿದ್ದತೆ ಹೇಗಿದೆ?
-ಕೋವಿನ್ ಪೋರ್ಟಲ್ನಲ್ಲಿ ಜನವರಿ 1ರಿಂದ ಮಕ್ಕಳ ಲಸಿಕೆ ನೋಂದಣಿ ಪ್ರಾರಂಭ
-ವಿದ್ಯಾರ್ಥಿ ಗುರುತಿನ ಚೀಟಿಯಾಗಿ 10ನೇ ತರಗತಿಯ ಐಡಿಯನ್ನು ಸೇರಿಸಲಾಗುತ್ತದೆ
-ಜನವರಿ 3ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಅಧಿಕೃತವಾಗಿ ಪ್ರಾರಂಭ
-ಭಾರತೀಯ ಮಕ್ಕಳಿಗೆ ಕೋವ್ಯಾಕ್ಸಿನ್
-ಇದಕ್ಕಾಗಿ 28 ದಿನಗಳ ಅಂತರ ನಿಗದಿಪಡಿಸಲಾಗಿದೆ
ವಯಸ್ಸಾದವರಿಗೆ ಬೂಸ್ಟರ್ ಡೋಸ್ ವ್ಯವಸ್ಥೆ:
-ಹೊಸ ವರ್ಸದಲ್ಲಿ ನೋಂದಣಿ ಆರಂಭ
-ಹಿಂದಿನಂತೆಯೇ ನಡೆಯಲಿದೆ ಪ್ರಕ್ರಿಯೆ
-ಮೂರನೇ ಡೋಸ್ಗೆ 9 ತಿಂಗಳ ಅಂತರ ಅಗತ್ಯ