ನವದೆಹಲಿ, ಜ.01 (DaijiworldNews/PY): ಹೊಸ ವರ್ಷದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನತೆಗೆ ಹೊಸ ವರ್ಷದ ಶುಭ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, "ಹೊಸ ವರ್ಷದ ಶುಭಾಶಯಗಳು. ಈ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಹಾಗೂ ಉತ್ತಮ ಆರೋಗ್ಯವನ್ನು ತರಲಿ. ನಾವು ಪ್ರಗತಿ ಹಾಗೂ ಸಮೃದ್ಧಿಯ ಹೊಸ ಉತ್ತುಂಗವನ್ನು ಏರುತ್ತಿರೋಣ. ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ಇನ್ನಷ್ಟು ಶ್ರಮಿಸೋಣ" ಎಂದಿದ್ದಾರೆ.
"ನಾಡಿನ ಸಮಸ್ತ ಜನತೆಗೆ 2022ರ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯಗಳು. ನವ ವರ್ಷ ಎಲ್ಲರಿಗೂ ಸುಖ-ಸಂತಸಗಳನ್ನು ಹೊತ್ತು ತರಲಿ. ಜನರ ಆರೋಗ್ಯದ ದೃಷ್ಟಿಯಿಂದ ಬಹಿರಂಗ ಸಂಭ್ರಮಾಚರಣೆಗಳಿಂದ ದೂರವಿದ್ದು, ಸಾಂಕ್ರಾಮಿಕದ ಸವಾಲುಗಳನ್ನು ನಾವೆಲ್ಲರೂ ಕೂಡಿ ಎದುರಿಸೋಣ, ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಕೊರೋನಾ ಮಣಿಸೋಣ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವನಿತಿನ್ ಗಡ್ಕರಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.