ನವದೆಹಲಿ, ಡಿ.31 (DaijiworldNews/PY): "2021ರ ಅಂತ್ಯದ ವೇಳೆಗೆ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಲಾಗುವುದು ಎಂಬುದು ಕೇಂದ್ರ ಸರ್ಕಾರದ ಭರವಸೆಯಾಗಿತ್ತು. ಆದರೆ, ಕೇಂದ್ರ ಸರ್ಕಾರ ಆ ಭರವಸೆಯನ್ನು ಈಡೇರಿಸಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "2021ರ ಅಂತ್ಯದ ವೇಳೆಗೆ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಲಾಗುವುದು ಎಂಬುದು ಕೇಂದ್ರ ಸರ್ಕಾರದ ಭರವಸೆಯಾಗಿತ್ತು. ಇಂದು ವರ್ಷದ ಕೊನೆಯ ದಿನ. ರಾಷ್ಟ್ರ ಇನ್ನೂ ಸಹ ಲಸಿಕೆಯ ಅಭಾವ ಎದುರಿಸುತ್ತಿದೆ. ಇದು ಮತ್ತೊಂದು ಭಾಷಣಕಲೆಯ ವೈಫಲ್ಯವಾಗಿದೆ" ಎಂದಿದ್ದಾರೆ.
"2021ರ ಅಂತ್ಯಕ್ಕೆ ಎಲ್ಲರಿಗೂ ಎರಡು ಡೋಸ್ ಲಸಿಕೆಯನ್ನು ನೀಡಲಾಗುವುದು" ಎಂದು ಕೇಂದ್ರ ಸರ್ಕಾರ ಜೂನ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ಗೆ ಹೇಳಿತ್ತು.