ಬೆಂಗಳೂರು, ಡಿ. 31 (DaijiworldNews/HR): ನಮ್ಮ ರಾಜ್ಯದಲ್ಲೂ ಕೊರೊನಾ ಹರಡುತ್ತಿದ್ದು, ಹೀಗಾಗಿ ಸರ್ಕಾರ ಕೆಲ ನಿರ್ಭಂದಗಳನ್ನ ಹಾಕಿದ್ದು, ಇದಕ್ಕೆ ಸಹಕರಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುಇರ್ತು ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಕೆಲವು ನಿರ್ಭಂದಗಳನ್ನ ಹಾಕುವಂತೆ ಸೂಚಿಸಿದ್ದು, ಜನರು ಇದಕ್ಕೆ ಸಹಕರಿಸಬೇಕು. ಅವರವರ ಮನೆಯಲ್ಲೇ ಸೆಲೆಬ್ರೇಶನ್ ಮಾಡಬೇಕು. ಗುಂಪುಗೂಡಿ ಸೆಲೆಬ್ರೇಶನ್ ಮಾಡಬಾರದು. ಪೊಲೀಸರಿಗೆ ಕೆಲಸ ಕೊಡುವ ರೀತಿ ಮಾಡಬೇಡಿ. ದಯವಿಟ್ಟು ಸಾರ್ವಜನಿಕರು ಸಹಕರಿಸಿ" ಎಂದರು.
ಇನ್ನು ಹೋಟೆಲ್, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಆರ್ಥಿಕ ನಷ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಈ ನಿರ್ಬಂಧಗಳನ್ನ ಹಾಕಲು ನಮಗೆ ಸಂತೋಷವಿಲ್ಲ. ಹೋಟೆಲ್ ಪಬ್ ಅವರವರ ವ್ಯಾಪರ ಮಾಡುತ್ತಿದ್ದಾರೆ. ಆದರೆ ಸದ್ಯ ಬದುಕು ಮುಖ್ಯ. ನಾವೂ ಈಗಾಗಲೇ ಸ್ಮಶಾನದಲ್ಲಿ ಆಯಂಬುಲೆನ್ಸ್ ಗಳು ಕ್ಯೂ ನಿಲ್ಲುತ್ತಿದ್ದುದನ್ನ ನೋಡಿದ್ದೇವೆ. ಮಾಧ್ಯಮಗಳಲ್ಲಿ ಅದನ್ನ ನೋಡುವಾಗ ತುಂಬಾ ನೋವಾಗಿದೆ. ಅದು ಆಗಬಾರದು ಅಂತಾ ಈ ರೀತಿ ನಿರ್ಬಂಧ ಮಾಡುತ್ತಿದ್ದೇವೆ" ಎಮ್ದು ಹೇಳಿದ್ದಾರೆ.