ನವದೆಹಲಿ, ಡಿ.31 (DaijiworldNews/PY): ಕಾಂಗ್ರೆಸ್ ಮುಖಂಡ ಅಲ್ಪಾವಧಿ ವಿದೇಶ ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ನಂತರ ರಾಹುಲ್ ಗಾಂಧಿ ಇಟಲಿಗೆ ತೆರಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಐಸಿಸಿ ಪ್ರಧಾನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, "ವೈಯುಕ್ತಿಕ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರು ಅಲ್ಪಾವಧಿ ವಿದೇಶ ಭೇಟಿಗೆ ತೆರಳಿದ್ದಾರೆ. ಬಿಜೆಪಿ ಹಾಗೂ ಅವರ ಗೆಳೆಯರು ಮಾಧ್ಯಮಗಳಲ್ಲಿ ಅನವಶ್ಯಕ ಗಾಳಿ ಸುದ್ದಿಗಳನ್ನು ಹರಡಬಾರದು" ಎಂದಿದ್ದಾರೆ.
ಜನವರಿ 3ರಂದು ರಾಹುಲ್ ಗಾಂಧಿ ಅವರು ಪಂಜಾಬ್ನ ಮೊಗಾದಲ್ಲಿನ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳುವುದು ನಿಗದಿಯಾಗಿದೆ. ಆ ಸಂದರ್ಭ ಅವರು ಹಿಂದಿರುಗಲಿರುವುದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಪಂಜಾಬ್, ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಜನವರಿ ಮಧ್ಯದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.