ಬೆಂಗಳೂರು, ಡಿ.31 (DaijiworldNews/PY): "ಬೆಕ್ಕಿನ ಕನಸಿನಲ್ಲಿ ಸದಾ ಇಲಿ ಎನ್ನುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಯಾವಾಗಲೂ ಹಿಂದುತ್ವದ ವಿರುದ್ದವೇ ಚಿಂತೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
"ಕಾಂಗ್ರೆಸ್ ಹಾಗೂ ಶಿವಕುಮಾರ್ ಸದಾ ಹಿಂದುತ್ವದ ವಿರುದ್ದ ಚಿಂತನೆ ನಡೆಸುತ್ತಾರೆ. ಕನಸು ಮನಸ್ಸಿನಲ್ಲೂ ಸಹ ಇವರು ಹಿಂದೂ ಧಾರ್ಮಿಕ ಭಾವನೆಯ ವಿರುದ್ದವಾಗಿ ಚಿಂನೆ ನಡೆಸುತ್ತಾರೆ. ಸರ್ಕಾರದ ಹಿಡಿತದಿಂದ ದೇವಾಲಯಗಳನ್ನು ಸ್ವತಂತ್ರಗೊಳಿಸುವುದು ಎಂದರೆ ದೇವಾಲಯಗಳನ್ನು ಖಾಸಗಿ ಪರಭಾರೆ ಮಾಡುವುದು ಅಲ್ಲ. ಎಲ್ಲದಕ್ಕೂ ಸಹ ಒಂದು ವ್ಯವಸ್ಥೆ ಇರುತ್ತದೆ. ಡಿ ಕೆ ಶಿವಕುಮಾರ್ ಅವರ ಈ ರೀತಿಯಾದ ಹೇಳಿಕೆ ಹಿಂದೂ ಭಾವೆನೆಗ ಧಕ್ಕೆ ತಂದಿದೆ" ಎಂದು ದೂರಿದ್ದಾರೆ.
"ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಎಂಟು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ" ಎಂದಿದ್ದಾರೆ.