ಶ್ರೀನಗರ್, ಡಿ. 31 (DaijiworldNews/HR): ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಶ್ರೀನಗರದ ಹೊರವಲಯದಲ್ಲಿ ಗುರುವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಪೊಲೀಸರು ಮತ್ತು ಸಿಆರ್ಪಿಎಫ್ ಯೋಧರು ಪಂಥಾಚೌಕ್ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದು, 36 ಗಂಟೆಗಳಲ್ಲಿ ನಡೆದ ಮೂರನೇ ಎನ್ಕೌಂಟರ್ ಇದಾಗಿದ್ದು,ಒಟ್ಟು 9 ಉಗ್ರರನ್ನು ಹತ್ಯೆಮಾಡಲಾಗಿದೆ.
ಇನ್ನು ಮೂವರು ಮೃತ ಭಯೋತ್ಪಾದಕರಲ್ಲಿ ಒಬ್ಬನನ್ನು ಸುಹೇಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದ್ದು, ಈತ ಶ್ರೀನಗರದ ಹೊರವಲಯದಲ್ಲಿರುವ ಝೆವಾನ್ನಲ್ಲಿ ಪೊಲೀಸ್ ಶಿಬಿರದ ನಡೆಸಿದ ದಾಳಿಯ ನಂಟು ಹೊಂದಿದ್ದ ಎನ್ನಲಾಗಿದೆ.