ವಿಜಯಪುರ, ಡಿ.31 (DaijiworldNews/PY): "ಸಂಕ್ರಾತಿಯ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದ್ದು, ಪಕ್ಷದಿಂದ ನನಗೆ ಸಿಹಿ ಸುದ್ದಿ ಸಿಗಲಿದೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷವನ್ನು ಬಲಪಡಿಸುವ ಸಲುವಾಗಿ ವರಿಷ್ಠರು ಕ್ರಮ ತೆಗೆದುಕೊಂಡಿದ್ದಾರೆ" ಎಂದಿದ್ದಾರೆ.
"ಸರ್ಕಾರ ಸೇರಿದಂತೆ ಪಕ್ಷ ಗಾಊ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಲಿದೆ" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಪ್ತಚರ ಇಲಾಖೆ ಗಮನಿಸುತ್ತಿದ್ದು, ಕೆಲವು ಸಚಿವರು ಕಚೇರಿಗೆ ಹೋಗುತ್ತಿಲ್ಲ ಎನ್ನುವುದನ್ನು ಸಹ ಗಮನಿಸಿದೆ. ಸಂಕ್ರಾತಿಯ ನಂತರ ಪ್ರಧಾನಿ ದೊಡ್ಡ ಬದಲಾವಣೆ ಮಾಡಲಿದ್ದಾರೆ" ಎಂದಿದ್ದಾರೆ.