ಬೆಂಗಳೂರು, ಡಿ.30 (DaijiworldNews/PY): ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾ ರೆಡ್ಡಿ ಪುತ್ರಿ ಯುವಿಕಾ ರೆಡ್ಡಿಯನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಂದು ಯುವಿಕಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಚನಾ ರೆಡ್ಡಿ ಕೊಲೆ ಪ್ರಕರಣದ ಸಂಬಂಧ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅರ್ಚನಾ ಅವರ್ನನು ಹತ್ಯೆಗೈದಿದ್ದ 3ನೇ ಪತಿ ನವೀನ್, ಅನೂಪ್ ಸೇರಿ 6 ಜನರನ್ನು ಬಂಧಿಸಲಾಗಿದ್ದು, ಇಂದು ಅರ್ಚನಾ ರೆಡ್ಡಿ ಪುತ್ರಿಯನ್ನೂ ಬಂಧಿಸಲಾಗಿದೆ.
ಜಿಗಣಿ ಮೂಲದ ಅರ್ಚನಾ ರೆಡ್ಡಿ (40) ಅವರು ಕೆಲ ದಿನಗಳಿಂದ ಬೆಳ್ಳಂದೂರಲ್ಲಿ ವಾಸವಿದ್ದರು. ವಿವಾಹವಾಗಿ ಇಬ್ಬರು ಮಕ್ಕಳಿದ್ದು, ಐದಾರು ವರ್ಷಗಳ ಹಿಂದೆ ಗಂಡನಿಗೆ ವಿಚ್ಛೇದನ ನೀಡಿದ್ದರು. ಬಳಿಕೆ ಇವರಿಗೆ ಬಾಡಿ ಬಿಲ್ಡರ್ ನವೀನ್ ಜೊತೆ ಸ್ನೇಹ ಬೆಳೆದಿದ್ದು, ನಂತರ ಈತನನ್ನು ಎರಡನೇ ವಿವಾಹವಾದರು. ಆದರೆ, ಕೆಲ ತಿಂಗಳ ಹಿಂದೆ ಹಣ-ಆಸ್ತಿ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ.
ಜಗಳದ ಬಳಿಕ ನವೀನ್ ವಿರುದ್ದ ಅರ್ಚನಾ ಜಿಗಣಿ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಿದ್ದರು. ಬಳಿಕ ಅರ್ಚನಾಗೆ ರೋಹಿತ್ ಎನ್ನುವವನ ಪರಿಚಯವಾಗಿದೆ. ಆತನೊಂದಿಗೆ ಸಲುಗೆಯಿಂದ ಇದ್ದ ಅರ್ಚನಾ ನವೀನ್ ಅನ್ನು ಕೊಲೆ ಮಾಡುವಂತೆ ಸಂಚು ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ವಿಚಾರ ತಿಳಿದ ನವೀನ ಅರ್ಚನಾಳನ್ನು ಕೊಲೆ ಮಾಡಿದ್ದಾನೆ. ನಿನ್ನೆ ಜಿಗಣಿ ಪುರಸಭೆ ಚುನಾವಣೆಯಲ್ಲಿ ಓಟ್ ಮಾಡಲು ಅರ್ಚನಾ ಬಂದಿದ್ದರು. ನಂತರ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಮಗನೊಂದಿಗೆ ಕಾರ್ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಹೊಸೂರು ಜಂಕ್ಷನ್ ನಳಿ ನವೀನ್ ಹಾಗೂ ಆತನ ಗ್ಯಾಂಗ್ ಅಡ್ಡಹಾಕಿದ್ದು, ಡ್ರೈವರ್ ಸೀಟ್ನಲ್ಲಿ ಕುಳಿತಿದ್ದ ಅರ್ಚನಾಳನ್ನು ಹೊರಗೆಳುದು ಕೊಲೆ ಮಾಡಿದ್ದಾರೆ.
ರಾತ್ರಿ 10.30ರ ಸುಮಾರಿಗೆ ಅರ್ಚನಾಳನ್ನು ಕೊಲೆಗೈದ ಕಿರಾತಕರು ಅಲ್ಲಿಂದ ಪರಾರಿಯಾಗಿದ್ದರು. ಅರ್ಚನಾ ಪುತ್ರ ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಪೊಲೀಸರು ನವೀನ್ ಅನ್ನು ಬಂಧಿಸಿದ್ದಾರೆ.
ನವೀನ್ ಅರ್ಚನಾಳ ಮಗಳ ಮೇಲೂ ಕಣ್ಣು ಹಾಕಿದ್ದು, ಯುವಿಕಾ ಕೊತೆ ಬಹಳ ಸಲುಗೆಯಿಂದ ಇದ್ದ. ಸದ್ಯ, ಪೊಲೀಸರು ಯುವಿಕಾಳನ್ನು ಬಂಧಿಸಿದ್ದು, ಕೊಲೆಯಲ್ಲಿ ಅವಳ ಮಾತ್ರ ಇರುವುದಾಗಿ ತಿಳಿದುಬಂದಿದೆ.