ಪುದುಕೊಟ್ಟೈ, ಡಿ 30 (DaijiworldNews/MS): ತಲೆಗೆ ಗುಂಡೇಟು ತಗುಲಿ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆಯು ತಮಿಳುನಾಡಿನ ಪುದುಕೊಟ್ಟೈ ಎಂಬಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕೆ. ಪುಘಝೇಂದಿ ಎಂದು ಗುರುತಿಸಲಾಗಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಶೂಟಿಂಗ್ ರೇಂಜ್ನಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭ ಸಮೀಪದ ಫೈರಿಂಗ್ ರೇಂಜ್ನಿಂದ ಸಿಡಿದ ಗುಂಡು ಬಾಲಕನಿಗೆ ತಗುಲಿದೆ. ಸಿಬ್ಬಂದಿಗಳು ತರಬೇತಿಯಲ್ಲಿ ನಿರತರಾಗಿದ್ದ ಸಂದರ್ಭ ರೈಫಲ್ ನಿಂದ ತಪ್ಪಿ ಸಿಡಿದ ಗುಂಡೊಂದು ಬಾಲಕನ ತಲೆಗೆ ತಗುಲಿದೆ
ತರಬೇತಿ ನಡೆಯುತ್ತಿದ್ದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಬಾಲಕನ ಅಜ್ಜನ ಮನೆ ಇದ್ದು ಗುಂಡು ತಗುಲುತ್ತಿದ್ದಂತೆಯೇ ಪುಘಝೇಂದಿ ಪ್ರಜ್ಞಾಹೀನ ನಾಗು ಕುಸಿದು ಬಿದ್ದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಕೇಂದ್ರೀಯ ಕೈಗಾರಿಕಾ ಭದ್ರತಾ ತರಬೇತಿ ಕೇಂದ್ರವನ್ನು ಬಂದ್ ಮಾಡಿಸಲಾಗಿದೆ.