ನವದೆಹಲಿ, ಡಿ 30 (DaijiworldNews/MS): ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ವರ್ಷಾಚರಣೆಗಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಬುಧವಾರ ಮುಂಜಾನೆ 4 ಗಂಟೆಗೆ ದೋಹಾ ಮೂಲಕ ಇಟಲಿಗೆ ಪ್ರಯಾಣಿಸಿದ್ದಾರೆ.
ಕಾಂಗ್ರೆಸ್ ಪಕ್ಷದ 137 ನೇ ಸಂಸ್ಥಾಪನಾ ದಿನವನ್ನು ಆಚರಿಸಿದ ಒಂದು ದಿನದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಹೊಸ್ತಿಲಲ್ಲೇ ರಾಹುಲ್ ವಿದೇಶ ಪ್ರವಾಸಕ್ಕೆ ತೆರಳಿರುವುದು ಕಾಂಗ್ರೆಸ್ ಮುಖಂಡರ ಮುಜುಗರಕ್ಕೆ ಕಾರಣವಾಗಿದೆ. ಜನವರಿ 3 ರಂದು ತಾನು ಭಾಗವಹಿಸಲಿರುವ ಪಂಜಾಬ್ ನಲ್ಲಿ ನಡೆಯುವ ಪಕ್ಷದ ರ್ಯಾಲಿ ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಿ ದಿಢೀರ್ ವಿದೇಶ ಪ್ರವಾಸಕ್ಕೆ ಹೊರಟಿರುವುದು ಕಾಂಗ್ರೆಸಿಗರನ್ನು ಗೊಂದಲಕ್ಕೆ ಕೆಡವಿದೆ.
ರಾಹುಲ್ ಗಾಂಧಿ ಅವರು ವೈಯಕ್ತಿಕ ಪ್ರವಾಸದಲ್ಲಿದ್ದು, ಬಿಜೆಪಿ ಮತ್ತು ಮಾಧ್ಯಮದ ಸ್ನೇಹಿತರು ಅನಗತ್ಯ ವದಂತಿಗಳನ್ನು ಹಬ್ಬಿಸಬಾರದು ಎಂದು ಎಐಸಿಸಿ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.