ನವದೆಹಲಿ, ಡಿ.30 (DaijiworldNews/PY): "ಮುಂದಿನ ವರ್ಷದ ಸೆಪ್ಟೆಂಬರ್ನಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ನಡಯಲಿದ್ದು, ಚುನಾವಣೆ ನಡೆಸಲು ಪಕ್ಷದಲ್ಲಿ ಸಿದ್ದತೆ ನಡೆಯುತ್ತಿದೆ" ಎಂದು ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ತಿಳಿಸಿದ್ಧಾರೆ.
"ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅಕ್ಟೋಬರ್ನಲ್ಲಿ ಪಕ್ಷ ಘೋಷಣೆ ಮಾಡಿತ್ತು. ಕಳೆದ ತಿಂಗಳ ನವೆಂಬರ್ನಲ್ಲಿ ಪಕ್ಷದಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಸದಸ್ಯತ್ವ ಅಭಿಯಾನವನ್ನು ಮಾರ್ಚ್ 31 ರವರೆಗೆ ನಿಗದಿಪಡಿಸಲಾಗಿದ್ದು, ಇನ್ನೂ ಒಂದು ತಿಂಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ" ಎಂದು ಮಿಸ್ತ್ರಿ ತಿಳಿಸಿದ್ದಾರೆ.
"ಅಧ್ಯಕ್ಷರ ಚುನಾವಣೆ ಸೆಪ್ಟೆಂಬರ್ನಲ್ಲಿ ನಡೆಸಲಾಗುವುದು. ಅಧ್ಯಕ್ಷರ ಆಯ್ಕೆಯ ಬಳಿಕ ಅಖಿಲ ಭಾರತ ಕಾಂಗ್ರೆಸ್ ಅಮಿತಿಯ ಅಧಿವೇಶನವನ್ನು ಕರೆಯಲಾಗುತ್ತದೆ. ಇದರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆಯ್ಕೆಯ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಎಷ್ಟು ಮಂದಿ ಸ್ಪರ್ಧಿಸಲಿದ್ಧಾರೆ ಎನ್ನುವುದನ್ನು ನೋಡಿಕೊಂಡು ಅದರ ಆಧಾರದಲ್ಲಿ ಚುನಾವಣೆ ಹೇಗೆ ನಡೆಯಲಿದೆ ಎನ್ನುವ ಬಗ್ಗೆ ತೀರ್ಮಾನಿಸಲಾಗುವುದು" ಎಂದಿದ್ಧಾರೆ.