ಹುಬ್ಬಳ್ಳಿ, ಡಿ. 29 (DaijiworldNews/HR): ಮತಾಂತರ ವಿರೋಧಿ ಮಸೂದೆಯ ಬಳಿಕ ಇದೀಗ ಧಾರ್ಮಿಕ ಸ್ಪರ್ಶ ಹೊಂದಿರುವ ಮತ್ತೊಂದು ಕಾನೂನನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಹಿಂದೂ ದೇಗುಲಗಳನ್ನು ಕಾನೂನಿನಿಂದ ಮುಕ್ತ ಮಾಡುತ್ತೇವೆ. ಸರ್ವ ಸ್ವತಂತ್ರವಾಗಿ ನಿರ್ವಹಣೆಗೆ ಅವಕಾಶ ಮಾಡಿಕೊಡ್ತೇವೆ" ಎಂದರು.
ಇನ್ನು ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೊಳಿಸಿ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ ಮಾಡಿಸುತ್ತೇವೆ. ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಕ್ಕೆ ಸ್ವತಂತ್ರವಿರುವ ರೀತಿ ಹಿಂದೂ ದೇವಾಲಯಗಳನ್ನೂ ಸ್ವತಂತ್ರ ಮಾಡುತ್ತೇವೆ. ಬಜೆಟ್ ಅಧಿವೇಶನದೊಳಗೆ ಇದಕ್ಕೆ ಕಾನೂನು ಸ್ವರೂಪ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯಿದೆ ಜಾರಿಗೆ 'ಸ್ಪೆಷಲ್ ಟಾಸ್ಕ್ ಫೋರ್ಸ್' ರಚನೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.