ಬೆಂಗಳೂರು, ಡಿ. 29 (DaijiworldNews/HR): ರಾಜ್ಯದಲ್ಲಿ ಬುಧವಾರ 566 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಮಂದಿ ಆರು ಮೃತಪಟ್ಟಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿಂದು 566 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 30,05,798 ಕ್ಕೆ ಏರಿದ್ದು, ಸಾವಿನ ಸಂಖ್ಯೆ 38,324 ಕ್ಕೆ ತಲುಪಿದೆ.
ಇನ್ನು ಇಂದು 245 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,59,674 ಕ್ಕೆ ತಲುಪಿದೆ.
ರಾಜ್ಯದಲ್ಲಿ ಈಗ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,771 ಆಗಿದ್ದು, ದಿನದ ಪಾಸಿಟಿವಿಟಿ ದರ 0.52 ಪ್ರತಿಶತದಷ್ಟಿದ್ದರೆ, ಸಾವಿನ ಪ್ರಮಾಣವು 1.06 ಶೇಕಡಾದಷ್ಟಿದೆ.