ಪಣಜಿ, ಡಿ.29 (DaijiworldNews/PY): "ಕಾಂಗ್ರೆಸ್ ಪಕ್ಷವನ್ನು ನಾಶಪಡಿಸಲು ಯತ್ನಿಸಿದರೆ ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ" ಎಂದು ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಣಜಿಯಲ್ಲಿ ಕಾಂಗ್ರೆಸ್ನ 137 ನೇಯ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಮಾತನಾಡಿದ ಅವರು, "ನಮ್ಮ ದೇಶವನ್ನು ದುರ್ಬಲಗೊಳಿಸಲು ಯತ್ನಿಸಿದರೆ ಅದಕ್ಕೆ ನಾವು ಬಿಡುವುದಿಲ್ಲ. ನಾವು ಜನರ ಧ್ವನಿಯನ್ನು ಮೌನಗೊಲಿಸಲು ಬಿಡುವುದಿಲ್ಲ" ಎಂದಿದ್ದಾರೆ.
"ದೇಶದ ಮಂದಿ ಇಂದು ಮಾತನಾಡಲು ಹಾಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಭಯಪಡುವ ಸ್ಥಿತಿ ಬಿಜೆಪಿ ನಿರ್ಮಾಣ ಮಾಡಿದೆ. ಆಡಳಿತದ ಪಕ್ಷದ ಇಚ್ಛೆಗೆ ವಿರುದ್ದವಾಗಿ ಮಾತನಾಡಿದ್ದಲ್ಲಿ ಅವಮಾನ ಹಾಗೂ ದಾಳಿ ಎದುರಿಸಬೇಕಾಗುತ್ತದೆ ಎನ್ನುವುದು ಜನತೆಗೆ ತಿಳಿದಿದೆ. ಹಾಗಾಗಿ ಜನರು ಅನ್ಯಾಯದ ವಿರುದ್ದ ಧ್ವನಿ ಎತ್ತುತ್ತಿಲ್ಲ" ಎಂದು ಬಿಜೆಪಿಯ ವಿರುದ್ದ ಹರಿಹಾಯ್ದಿದ್ದಾರೆ.