ನವದೆಹಲಿ, ಡಿ 29 (DaijiworldNews/MS): ಮುಸ್ಲಿಮರ ನಂತರ ಕ್ರಿಶ್ಚಿಯನ್ನರು ಹಿಂದುತ್ವ ಬ್ರಿಗೇಡ್ನ ಹೊಸ ಗುರಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬುಧವಾರ ಹೇಳಿದ್ದಾರೆ.
ಮದರ್ ತೆರೆಸಾ ಮಿಷನರೀಸ್ ಆಫ್ ಚಾರಿಟಿ (ಎಂಒಸಿ) ಖಾತೆ ನೋಂದಣಿಯನ್ನು ನವೀಕರಿಸಲು ಸರ್ಕಾರ ನಿರಾಕರಿಸಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಡವರು ಹಾಗೂ ಉತ್ತಮ ಸೇವೆ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯ ಮೇಲೆ ಸರ್ಕಾರ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಗೋವಾದ ಕಾಂಗ್ರೆಸ್ನ ಹಿರಿಯ ಚುನಾವಣಾ ವೀಕ್ಷಕರಾಗಿರುವ ಚಿದಂಬರಂ, ಮಿಷನರೀಸ್ ಆಫ್ ಚಾರಿಟಿ (MoC) ಗೆ ಸಂಬಂಧಿಸಿದ ಗೃಹ ಸಚಿವಾಲಯದ ಕೈಗೊಂಡದ ಕ್ರಮದ ಬಗ್ಗೆ ಮುಖ್ಯ ಮಾಧ್ಯಮಗಳು ಹೈಲೈಟ್ ಮಾಡದಿರುವುದು "ದುಃಖದಾಯಕ ಮತ್ತು ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ.
ಕ್ರಿಶ್ಚಿಯನ್ ಧರ್ಮಾರ್ಥ ಕಾರ್ಯಗಳ ವಿರುದ್ಧ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ಬಹಿರಂಗಪಡಿಸುತ್ತದೆ. ಮುಸ್ಲಿಮರ ನಂತರ, ಕ್ರಿಶ್ಚಿಯನ್ನರು ಹಿಂದುತ್ವ ಬ್ರಿಗೇಡ್ನ ಹೊಸ ಗುರಿಯಾಗಿದ್ದಾರೆ. ಕೋಲ್ಕತ್ತ, ಪಶ್ಚಿಮ ಬಂಗಾಳದಲ್ಲಿ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ವಿದೇಶ ದೇಣಿಗೆ ನಿರಾಕರಿಸುವುದರಿಂದ ಆಶ್ಚರ್ಯಕರವಾದದ್ದೇನೂ ಇಲ್ಲ. ಇದು ಭಾರತದಲ್ಲಿ ಬಡವರು ಹಾಗೂ ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಅವರ ಸ್ಮರಣೆಗೆ ಆದ ದೊಡ್ಡ ಅವಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.