ನವದೆಹಲಿ, ಡಿ.29 (DaijiworldNews/PY): ಒಮ್ರಿಕಾನ್ ಆತಂಕದ ನಡುವೆ ಜನವರಿ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಹಾಗೂ ಕುವೈತ್ ಭೇಟಿಯನ್ನು ಮುಂದೂಡಲಾಗಿದೆ.
ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಭೇಟಿಯನ್ನು ಮರು ನಿಗದಿಪಡಿಸಬೇಕಾಗಿದ್ದು, ಫೆಬ್ರವರಿಯಲ್ಲಿ ನಿಗದಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಪಂಚದಾದ್ಯಂತ ಒಮಿಕ್ರಾನ್ ರೂಪಾಂತರ ಉಲ್ಬಣವಾಗುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ಹಾಗೂ ಯುರೋಪ್ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಯುಕೆಯಲ್ಲಿ ಒಮಿಕ್ರಾನ್ ವೇಗವಗಿ ಹರಡುವ ಕಾರಣ ಪ್ರತಿದಿನ ಕೊರೊನಾ ದಾಖಲೆಯ ಪ್ರಕರಣಗಳು ವರದಿಯಾಗುತ್ತಿವೆ.