ನವದೆಹಲಿ, ಡಿ. 29 (DaijiworldNews/HR): ಲೂದಿಯಾನ ನ್ಯಾಯಾಲಯ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಜಸ್ವಿಂದರ್ ಸಿಂಗ್ ಮುಲ್ತಾನಿ ಜರ್ಮನಿಯಲ್ಲಿ ಸೆರೆ ಸಿಕ್ಕಿದ್ದಾನೆ ಎಂದು ತಿಳಿದು ಬಂದಿದೆ.
ಜಸ್ವಿಂದರ್ ಸಿಂಗ್ ಮುಲ್ತಾನಿ ಪಾಕಿಸ್ತಾನದ ಎಸ್ಐ ಜೊತೆ ಸೇರಿ ಮುಂಬೈ, ಪಂಜಾಬ್ನ ಹಲವು ಭಾಗಗಳಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.
ಐಎಸ್ಐ ಬೆಂಬಲಿತ ಕಲಿಸ್ತಾನದ ಸಿಖ್ ಫರ್ ಜಸ್ಟಿಸ್ ಸಂಘಟನೆಯಲ್ಲಿ ಮುಲ್ತಾನಿ ಸಕ್ರಿಯ ಕಾರ್ಯಕರ್ತನಾಗಿದ್ದು, 2020ರಲ್ಲಿ ಖಲಿಸ್ತಾನ ಹೋರಾಟದ ಮುಂಚೂಣಿಯಲ್ಲಿದ್ದ ಗುರ್ಪಂಥ್ ಸಿಂಗ್ ಪನ್ನು ಆಪ್ತನಾಗಿದ್ದ ಈತ ಲೂದಿಯಾನ ನ್ಯಾಯಾಲಯ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾಗಿದೆ.
ಇನ್ನು ಭಾರತೀಯ ತನಿಖಾ ಸಂಸ್ಥೆಗಳು ನೀಡಿರುವ ಮಾಹಿತಿ ಆಧರಿಸಿ ಜರ್ಮನಿಯಲ್ಲಿ ಮುಲ್ತಾನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಜರ್ಮನಿಗೆ ತೆರಳಿರುವ ಭಾರತೀಯ ಅಧಿಕಾರಿಗಳು ಅಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.