ಹುಬ್ಬಳ್ಳಿ, ಡಿ.29 (DaijiworldNews/PY): "ಜನರು ಸಂಕಷ್ಟದಲ್ಲಿ ಇರುವ ಕಾರಣ ಡಿ.31ರ ಕರ್ನಾಟಕ ಬಂದ್ ಅನ್ನು ಕೈ ಬಿಡಬೇಕು" ಎಂದು ಸಿಎ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಎಂಇಎಸ್ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದೇವೆ. ಹಾಗಾಗಿ ಡಿ.31ರ ಬಂದ್ ಅನ್ನು ಕೈ ಬಿಡಬೇಕು. ಕೊರೊನಾ ಕಾರಣದಿಂದ ಸಾಕಷ್ಟು ಸಂಕಷ್ಟ ಉಂಟಾಗಿದೆ. ಒಂದು ವೇಳೆ ಬಲವಂತದ ಬಂದ್ಗೆ ಮುಂದಾದಲ್ಲಿ ಅಲ್ಲಿಯೇ ಉತ್ತರಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
"2022ರ ಮಾರ್ಚ್ 28 ಹಾಗೂ 29ರಂದು ಮುಂದಿನ ಕಾರ್ಯಕಾರಿಣಿ ಸಭೆಯನ್ನು ನೂತನ ಜಿಲ್ಲೆ ವಿಜಯನಗರದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ" ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, "ನೂತನ ಜಿಲ್ಲೆಯಾದ ವಿಜಯನಗರದಲ್ಲಿ ಆನಂದ್ ಸಿಂಗ್ ಅವರ ಮುಂದಾಳತ್ವದಲ್ಲಿ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗುವುದು" ಎಂದು ತಿಳಿಸಿದ್ದಾರೆ.