ಬೆಂಗಳೂರು, ಡಿ. 29 (DaijiworldNews/HR): ಬಿಜೆಪಿ ಮತ್ತು ಜೆಡಿಎಸ್ನವರು ಸೇರಿ ನನ್ನ ವಿರುದ್ಧ ದೆಹಲಿಯಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ. ನನಗೆ ಎಲ್ಲ ಮಾಹಿತಿಯೂ ದೊರೆತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರು, ಯಾವುದೇ ರೀತಿಯ ಷಡ್ಯಂತ್ರ ಮಾಡಿದರೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ. ಪಾದಯಾತ್ರೆಯಿಂದ ಹಿಂದೆ ಹೆಜ್ಜೆ ಇಡುವುದಿಲ್ಲ. ಇದಕ್ಕಾಗಿ ಜೀವ ಹೋದರೂ ಪರವಾಗಿಲ್ಲ" ಎಂದರು.
ಇನ್ನು "ನಾನು ಕಲ್ಲು ನುಂಗಿದ್ದೀನಿ, ಕಬ್ಬಿಣ ನುಂಗಿದ್ದೀನಿ ಎಂಬೆಲ್ಲ ಆರೋಪಗಳನ್ನು ಮಾಡಿದ್ದಾರೆ, ಅವರ ಅವಧಿಯಲ್ಲಿ ತನಿಖೆ ಕೂಡ ನಡೆದಿದೆ. ಮೊನ್ನೆ ದೆಹಲಿಗೆ ಹೋಗಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಗೊತ್ತಿದೆ" ಎಂದಿದ್ದಾರೆ.
"ಪಾದಯಾತ್ರೆಗೆ ನನಗೆ ಯಾವ ಅನುಮತಿಯೂ ಬೇಕಿಲ್ಲ. ನನ್ನ ಕಾಲು ನಾನು ನಡೆಯುತ್ತೇನೆ. ಜ.9ರಿಂದ ಪಾದಯಾತ್ರೆ ಆರಂಭವಾಗಲಿದೆ. 19ರವರೆಗೂ ನಡೆಯಲಿದೆ" ಎಂದು ಹೇಳಿದ್ದಾರೆ.