ಬೆಳಗಾವಿ, ಡಿ. 29 (DaijiworldNews/HR): ಕರ್ನಾಟಕ ಬಂದ್ಗೆ ಡಿಸೆಂಬರ್ 31ರಂದು ಈಗಾಗಲೇ ನಿಗದಿ ಪಡಿಸಲಾಗಿದ್ದು, ನಿಗದಿಯಾದಂತೆ ಅಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂದು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಂದ್ ನಿಗದಿಯಾಗಿದ್ದು, ಅದರಲ್ಲಿ ಬದಲಾವಣೆಯ ಮಾತೇ ಇಲ್ಲ. ಕನ್ನಡಿಗರೆಲ್ಲರೂ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಡಿಸೆಂಬರ್ 31ರಂದು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುವುದು. ಆ ಬಳಿಕ ಸರ್ಕಾರಕ್ಕೆ ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ಮನವಿ ಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.