ಹುಬ್ಬಳ್ಳಿ, ಡಿ.29 (DaijiworldNews/PY): "ಸಚಿವ ಸ್ಥಾನವನ್ನು ಧಾರಾಳವಾಗಿ ನೀಡಲು ಸಿದ್ದನಿದ್ದೇನೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನವನ್ನು ಬಿಟ್ಟು, ಪಕ್ಷದ ಸಂಘಟನೆಗಾಗಿ ದುಡಿಯಲು ತಯಾರಿದ್ದೇನೆ" ಎಂದಿದ್ದಾರೆ
ಸಂಪುಟದಲ್ಲಿ ಹಿರಿಯರನ್ನು ಕೈಬಿಡಬೇಕು ಎನ್ನುವ ರೇಣುಕಾಚಾರ್ಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನನ್ನನ್ನು ಸಂಪುಟದಿಂದ ಕೈ ಬಿಡುವುದಿದ್ದರೆ ನಾನು ಸಹ ಸಿದ್ದನಿದ್ದೇನೆ. ನಾನು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೆಯದು ಹಾಗೂ ಕೆಟ್ಟದು ಎಂದು ನನಗೆ ತಿಳಿದಿದೆ" ಎಂದು ಹೇಳಿದ್ಧಾರೆ.
"ಕಾರ್ಯಕಾರಿಣಿಯಲ್ಲಿ ಹಲವು ವಿಚಾರಗಳ ಕುರಿತ ಚರ್ಚೆಯಾಗಿದೆ. ನಮಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ದೊಡ್ಡ ಗೆಲುವಾಗಿದೆ. ಸಿಂದಗಿಯಲ್ಲಿ ಹೆಚ್ಚು ಮತಗಳನ್ನು ನೀಡಿದ್ದಕ್ಕಾಗಿ ಜನರಿಗೆ ಧನ್ಯವಾದಗಳು" ಎಂದಿದ್ದಾರೆ.
"ಶಿವಮೊಗ್ಗದಲ್ಲಿ ಜ.5ರಂದು ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಾವು ಅಲ್ಲಿ ಮುಂದಿನ ಚುನಾವಣೆಗಳ ಹಾಗೂ ಪಕ್ಷ ಸಂಘಟನೆಗಳ ಕುರಿತು ಚರ್ಚಿಸಲಿದ್ದೇವೆ" ಎಂದು ಹೇಳಿದ್ಧಾರೆ.