ಹುಬ್ಬಳ್ಳಿ, ಡಿ.29 (DaijiworldNews/PY): "ಕಾಂಗ್ರೆಸ್ನದ್ದು ದೇಶದಲ್ಲಿ ಹಾರದ ಬಾವುಟ" ಎಂದು ಕಂದಾಯ ಸಚಿವ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನವೇ ಅವರ ಬಾವುಟ ಹಾರಲಿಲ್ಲ, ಬಿದ್ದು ಹೋಗಿದೆ. ಕಾಂಗ್ರೆಸ್ನದ್ದು ದೇಶದಲ್ಲಿ ಹಾರದ ಬಾವುಟ" ಎಂದಿದ್ಧಾರೆ.
"ಬೀಳುವ ಬಾವುಟದಡಿ ಕೆಲಸ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಧಿಕಾರಕ್ಕಾಗಿ ಹಗಲುಕನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕೇವಲ ಕನಸು. ಕಾಂಗ್ರೆಸ್ ರಾಜ್ಯದಲ್ಲಿ ದೂಳಿಪಟ ಆಗಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ನ ಪ್ರಕಾರ ಮತಾಂತರ ಒಳ್ಳೆಯದು. ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ಕಾಂಗ್ರೆಸ್ಸನ್ನು ದೂರ ಇಡಲಿದ್ದಾರೆ. ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೀರಶೈವ, ಲಿಂಗಾಯತ ಎಂದು ಒಡೆಯಲು ಮುಂದಾಗಿ ಕಾಂಗ್ರೆಸ್ ನುಚ್ಚು ನೂರಾಯಿತು" ಎಂದು ತಿಳಿಸಿದ್ಧಾರೆ.
"ಅಧಿಕಾರಕ್ಕೆ ಬರಬೇಕೆನ್ನುವ ತಿರುಕನ ಕನಸು ಕಾಣುತ್ತಿರುವ ಹಿಂದೂ ವಿರೋಧಿ ಕಾಂಗ್ರೆಸ್ನ ಆಸೆ ಈಡೇರುವುದಿಲ್ಲ" ಎಂದು ಹೇಳಿದ್ಧಾರೆ.