ಬೆಂಗಳೂರು, ಡಿ.29 (DaijiworldNews/PY): ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರ ಸ್ವಯಂ ನಿವೃತ್ತಿ ಅರ್ಜಿಯನ್ನು ಸರ್ಕಾರ ಒಪ್ಪಿಗೆ ನೀಡಿದ್ದು, ಡಿ.31ರಂದು ಸ್ವಯಂ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರವು, ತಮ್ಮ ಸ್ವಯಂ ನಿವೃತ್ತಿಯ ಅರ್ಜಿಯನ್ನು ಅನುಮೋದಿಸಿದೆ ಎಂದು ಹೇಳಿದ್ದಾರೆ.
ಸ್ವಯಂ ನಿವೃತ್ತಿಯ ಬಳಿಕ ಭಾಸ್ಕರ್ ರಾವ್ ಅವರು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಟ್ರಾವೆಲ್ ಮಾಡಲು ಬಯಸಿದ್ದೇನೆ. ಅಲ್ಲದೇ, ನನ್ನ ಕುಟುಂಬಸ್ಥರೊಂದಿಗೆ ಸಮಯ ಕಳೆಯುವುದು, ಪಾಠ ಹೇಳಿಕೊಡುವುದರೊಂದಿಗೆ ಕಾಲ ಕಳೆಯಲು ಇಚ್ಛಿಸಿದ್ದೇನೆ" ಎಂದಿದ್ದಾರೆ.
1954ರಲ್ಲಿ ಜನಿಸಿದ ಭಾಸ್ಕರ್ ರಾವ್ ಅವರು 2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಇವರು ಕರ್ನಾಟಕ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಸಹ ಕೆಲಸ ನಿರ್ವಹಿಸಿದ್ದರು. 1900ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಹಾಲಿ ರೈಲ್ವೇ ಇಲಾಖೆಯ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ಭಾಸ್ಕರ್ ರಾವ್ ಅವರು ಸೇವೆಯಿಂದ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಅನುಮೋದನೆ ನೀಡಬೇಕು ಎಂದು ಅರ್ಜಿಯನ್ನು ಕೋರಿದ್ದರು.
1990 ಐಪಿಎಸ್ ಬ್ಯಾಚ್ನ ಈಗಿನ ಕಮಿಷನರ್ ಕಮಲ್, ಆಗಿನ ಡಿಜಿಪಿ, ಪಿಕೆ ಗಾರ್ಗ್ ಅವರ ನಿವೃತ್ತಿಯ ಬಳಿಕ ಈ ವರ್ಷದ ಎಪ್ರಿಲ್ನಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪೊಲೀಸ್ ಮಹಾನಿರೀಕ್ಷಕ ಶ್ರೇಣಿಯ ಮೂವರು ಅಧಿಕಾರಿಗಳಾದ, ಎಸ್ ಮುರುಗನ್, ಹೆಚ್ಚುವರಿ ಪೊಲೀಸ್ ಕಮಿಸನರ್, ಕೆ ವಿ ಶರತ್ಚಂದ್ರ, ಅಪರಾಧ ತನಿಖಾ ಇಲಾಖೆ ಹಾಗೂ ಎಂ ನಂಜುಡಸ್ವಾಮಿ, ಕಾರಾಗೃಹ ಇಲಾಖೆಯಲ್ಲಿದ್ದಾರೆ. ಡಿ.31ಎಂದು ಎಡಿಜಿಪಿಗಳಾಗಿ ಬಡ್ತಿ ನೀಡಲು ತೀರ್ಮಾನಿಸಲಾಗಿದೆ.