ಬೆಂಗಳೂರು, ಡಿ 29 (DaijiworldNews/MS): ಬಿಗ್ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್ ಬ್ರಿಗೇಡ್ ರೋಡ್ನಲ್ಲಿ ನಶೆಯಲ್ಲಿ ರಂಪಾಟ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬ್ರಿಗ್ರೇಡ್ ರೋಡ್ ನಲ್ಲಿ ಸ್ನೇಹಿತರೊಂದಿಗೆ ಬಂದಿದ್ದ ದಿವ್ಯ ಸುರೇಶ್ ಗೆ ಪೊಲೀಸರು ನೈಟ್ ಕರ್ಪ್ಯೂ ಇದೆ ಮನೆ ಹೋಗಿ ಎಂದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ರಂಪಾಟ ಮಾಡಿದ್ದಾರೆ. ಸುದ್ದಿ ತಿಳಿದು ಮಾಧ್ಯಮಗಳು ಬರುತ್ತಿದ್ದಂತೆ ಕ್ಯಾಮೆರಾ ಕಂಡು ದಿವ್ಯ ಸುರೇಶ್ ಕಾಲ್ಕಿತ್ತಿದ್ದಾರೆ.
ದಿವ್ಯಾ ಸುರೇಶ್ ಅವರು ಬಿಗ್ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದಿದ್ದರು.ಮಂಜು ಪಾವಗಡ ಜೊತೆಗಿನ ಸ್ನೇಹದಿಂದ ‘ಬಿಗ್ ಬಾಸ್’ ಮನೆಯಲ್ಲಿ ಹೆಚ್ಚು ಸೌಂಡ್ ಮಾಡಿದ್ದರು.