ನವದೆಹಲಿ, ಡಿ. 28 (DaijiworldNews/SM): ದೇಶದೆಲ್ಲೆಡೆ ಇದೀಗ ಬೂಸ್ಟರ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯ ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ಬೂಸ್ಟರ್ ಡೋಸ್ ಪಡೆಯಲು ವೈದ್ಯರ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಎರಡನೇ ಡೋಸ್ ಪಡೆದ ದಿನದಿಂದ 39 ವಾರಗಳು ಅಥವಾ 9 ತಿಂಗಳು ಪೂರ್ಣಗೊಂಡ ಬಗ್ಗೆ ಕೋ- ವಿನ್ ಪೋರ್ಟಲ್ ನಲ್ಲಿನ ದಾಖಲೆ ಆಧಾರದ ಮೇಲೆ ಅರ್ಹ ಇಂತಹ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ತಿಳಿಸಲಾಗಿದೆ.
ಬೂಸ್ಟರ್ ಡೋಸ್ ಪಡೆಯಲು ಅರ್ಹರಾದ ಎಲ್ಲಾ ಫಲಾನುಭವಿಗಳಿಗೆ ಕೋವಿನ್ ಸಂದೇಶ ಕಳುಹಿಸಲಿದೆ. ಅದು ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಪ್ರತಿಬಿಂಬಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.