ನವದೆಹಲಿ, ಡಿ. 28 (DaijiworldNews/HR): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿನೇಶ್ ಮೊಂಗಿಯಾ ಅವರು ಬಿಜೆಪಿ ಸೇರ್ಪಡೆಗೊಂಡಿದ್ದು, ಅವರೊಂದಿಗೆ ಕಾಂಗ್ರೆಸ್ನ ಶಾಸಕರಾದ ಬಲವಿಂದರ್ ಸಿಂಗ್ ಲಾಡಿ, ಫತೆಹ್ಜಂಗ್ ಸಿಂಗ್ ವಾಜವಾ ಹಾಗೂ 13 ಮಂದಿ ಇತರರು ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮತ್ತು ಪಂಜಾಬ್ ಚುನಾವಣೆ ಮೇಲುಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲುನಿ ಸಮ್ಮುಖದಲ್ಲಿ ಮೊಂಗಿಯಾ, ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದಂತೆ 16 ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇನ್ನು ಬಿಜೆಪಿ ಸೇರ್ಪಡೆಗೊಂಡ ಇತರ 13 ಮಂದಿ ಪೈಕಿ ಮಾಜಿ ಲೋಕಸಭಾ ಸದಸ್ಯ ರಾಜದೇವ್ ಖಲ್ಸಾ, 3 ಬಾರಿ ಶಾಸಕರಾಗಿದ್ದ ಶಿರೋಮಣಿ ಅಕಾಲಿದಳದ ಮುಖಂಡ ಗುರ್ತೆ ಸಿಂಗ್ ಗುಧಿಯಾನಾ, ಯುನೈಟೆಡ್ ಕ್ರಿಶ್ಚಿಯನ್ ಫ್ರಂಟ್ ಪಂಜಾಬ್ನ ಅಧ್ಯಕ್ಷ ಕಮಲ್ ಭಕ್ಷಿ, ವಕೀಲ ಮಧುಮೀತ್ ಪ್ರಮುಖರು.