ಬೆಂಗಳೂರು, ಡಿ. 28 (DaijiworldNews/HR): ಸಿದ್ಧರಾಮಯ್ಯನವರ ಪಕ್ಷ ಎಂದು ಅಧಿಕಾರಕ್ಕೆ ಬರುವುದಿಲ್ಲ. ಅವರು ಅಧಿಕಾರಕ್ಕೆ ಬಂದರೆ ಅಲ್ವಾ ಕಾಯ್ದೆಯನ್ನ ರದ್ದುಗೊಳಿಸೋಕೆ ಆಗೋದು. ಅವರು ಅಧಿಕಾರಕ್ಕೆ ಬರಲ್ಲ ಅದಕ್ಕೇ ಹಾಗೇ ಹೇಳ್ತಿದ್ದಾರೆ ಎಂದು ಸಚಿವ ಸುಧಾಕರ್ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದು ವಾರದ ಒಳಗೆ ಮತಾಂತರ ನಿಷೇಧ ಕಾಯ್ದೆ ಕಿತ್ತುಹಾಕ್ತೀವಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿ, "ಸಿದ್ಧರಾಮಯ್ಯನವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅವರು ಅಧಿಕಾರಕ್ಕೆ ಬಂದರೆ ಅಲ್ವಾ ಕಾಯ್ದೆಯನ್ನ ರದ್ದುಗೊಳಿಸುವುದು" ಎಂದಿದ್ದಾರೆ.
ಇನ್ನು ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ಕಾರಕಾರಣಿ ಸಭೆ ಬಗ್ಗೆ ಮಾತನಾಡಿರುವ ಸುಧಾಕರ್, ಸಭೆಯಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಹೋಗುತ್ತಿದ್ದೇವೆ. ಬೊಮ್ಮಾಯಿ ಸಿಎಂ ಆದ ನಂತರ ನಡೆಯುತ್ತಿರು ಮೊದಲ ಕಾರ್ಯ ಕಾರಣಿ ಸಭೆ ಇದಾಗಿದ್ದು, ಸಭೆಯಲ್ಲಿ ಹಲವು ವಿಚಾರಗಳನ್ನ ಚರ್ಚೆ ಮಾಡಲಾಗುತ್ತದೆ" ಎಂದು ತಿಳಿಸಿದ್ದಾರೆ.