ನವದೆಹಲಿ, ಡಿ. 28 (DaijiworldNews/HR): ಕೊರೊನಾ ಲಸಿಕೆಗಳಿಗೆ ಕೋವೊವಾಕ್ಸ್, ಕಾರ್ಬೆವಾಕ್ಸ್, ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ತುರ್ತು ಬಳಕೆಗಾಗಿ ಅನುಮೋದಿಸುವಂತೆ ಭಾರತೀಯ ಔಷಧ ನಿಯಂತ್ರಕ ಜನರಲ್ ಗೆ ಶಿಫಾರಸ್ಸು ಮಾಡಿದೆ.
ಸಾಂದರ್ಭಿಕ ಚಿತ್ರ
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊರೊನಾ ಲಸಿಕೆ ಕೋವೊವಾಕ್ಸ್ ಮತ್ತು ಬಯೋಲಾಜಿಕಲ್ ಇ ಲಸಿಕೆ ಕಾರ್ಬೆವಾಕ್ಸ್ ಗೆ ತುರ್ತು ಬಳಕೆಯ ಅಧಿಕಾರ ನೀಡಲು ದೇಶದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಶಿಫಾರಸು ಮಾಡಿದೆ.
ಇನ್ನು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ಕೊರೊನಾ ವಿಷಯ ತಜ್ಞರ ಸಮಿತಿ ಎಸ್ ಪಿಒ2 93 ಪ್ರತಿಶತ ಹೊಂದಿರುವ ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ನಿರ್ಬಂಧಿತ ತುರ್ತು ಬಳಕೆಗಾಗಿ ಕೊರೊನಾ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಅನ್ನು ತಯಾರಿಸಲು ಮತ್ತು ಮಾರುಕಟ್ಟೆ ಮಾಡಲು ಅನುಮತಿ ನೀಡಲು ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ಭಾರತದ ಔಷಧ ನಿಯಂತ್ರಕ ಜನರಲ್ಗೆ ಎಲ್ಲಾ ಶಿಫಾರಸುಗಳನ್ನು ಅಂತಿಮ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಡಿಸಿಜಿಐ ಅನುಮೋದಿಸಿದರೆ ತುರ್ತು ಬಳಕೆಯ ದೃಢೀಕರಣವನ್ನು ಪಡೆದ ಲಸಿಕೆಗಳ ಸಂಖ್ಯೆ 8ಗೆ ಏರಿಕೆಯಾಗಲಿದೆ.