ಬೆಂಗಳೂರು, ಡಿ. 28 (DaijiworldNews/HR): ಇಬ್ಬರು ಯುವಕರು ಮಹಿಳೆಯೊಬ್ಬರನ್ನು ದಾರಿಯಲ್ಲೇ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹತ್ಯೆಯಾದ ಮಹಿಳೆಯನ್ನು ಹೆಚ್ ಎಸ್ ಆರ್ ಲೇ ಔಟ್ ನ ಮಹಿಳೆ ಅರ್ಚನಾ ರೆಡ್ಡಿಎಂದು ಗುರುತಿಸಲಾಗಿದೆ.
ಅರ್ಚನಾ ರೆಡ್ಡಿ ಅವರು ಹೊಸೂರು ರಸ್ತೆಯ ಹೊಸ ರೋಡ್ ಜಂಕ್ಷನ್ ಬಳಿಯಲ್ಲಿ ಮನೆಗೆ ಮರಳುತ್ತಿದ್ದು, ಈ ಸಂದರ್ಭದಲ್ಲಿ ಆಕೆಯನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿ ತೆಡೆದ ಹಂತಕರಿಬ್ಬರು, ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.
ಇನ್ನು ಅರ್ಚನಾ ರೆಡ್ಡಿ ಕೊಲೆಯ ಬಗ್ಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ ಅನೈತಿಕ ಸಂಬಂಧಕ್ಕೆ ನವೀನ್ ಹಾಗೂ ಸಂತೋಷ್ ಎಂಬುವರು ಕೃತ್ಯ ನೆಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.