ನವದೆಹಲಿ, ಡಿ. 28 (DaijiworldNews/HR): ದೆಹಲಿ ಪೊಲೀಸರು ವೈದ್ಯರ ಮೇಲೆ ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ಡಿಸೆಂಬರ್ 29ರಂದು ಬೆಳಿಗ್ಗೆ 8 ರಿಂದ ದೇಶಾದ್ಯಂತ ಎಲ್ಲ ಆರೋಗ್ಯ ಸೇವೆಗಳಿಂದ ಸಂಪೂರ್ಣ ಹಿಂತೆಗೆದುಕೊಳ್ಳುವಂತೆ ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ಕರೆ ನೀಡಿದೆ ಎಂದು ತಿಳಿದು ಬಂದಿದೆ.
ವೈದ್ಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯ ಸಮಯದಲ್ಲಿ ಮಹಿಳಾ ವೈದ್ಯರನ್ನು ಪುರುಷ ಪೊಲೀಸ್ ಸಿಬ್ಬಂದಿ ಕ್ರೂರವಾಗಿ ಥಳಿಸಿ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಎಫ್ಎಐಎಂಎ ತಿಳಿಸಿದೆ.
ಇನ್ನು ನೀಟ್-ಪಿಜಿ 2021 ಕೌನ್ಸೆಲಿಂಗ್ ವಿಳಂಬದ ಬಗ್ಗೆ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ರಸ್ತೆಯಲ್ಲಿ ಪೊಲೀಸರು ಮತ್ತು ವೈದ್ಯರ ನಡುವೆ ಘರ್ಷಣೆ ನಡೆದಿದೆ. ಅನೇಕ ಜನರು ಬೀದಿ ಬದಿಯಲ್ಲಿ ಗಾಯಗೊಂಡಿದ್ದರು ಎಂದು ಹೇಳಿದೆ.
ಪೊಲೀಸರ ಈ ದೌರ್ಜನ್ಯವನ್ನು ಖಂಡಿಸಿ ದೇಶಾದ್ಯಂತ ಡಿಸೆಂಬರ್ 29 ರಂದು ಎಲ್ಲಾ ಆರೋಗ್ಯ ಸೇವೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳಲಾಗುವುದು ಎಂದು ಕರೆ ನೀಡಿದೆ.