ಪಾಟ್ನಾ, ಡಿ. 28 (DaijiworldNews/HR): ಬೇರೆ ರಾಜ್ಯಗಳಿಂದ ಬರುವವರು ಮದ್ಯ ಸೇವಿಸಬೇಕು ಅಂದರೆ ಬಿಹಾರಕ್ಕೆ ಬರಲೇಬೇಡಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮದ್ಯ ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಇದಾಗಲೇ ಕೆಲವು ರಾಜ್ಯ ಸರ್ಕಾರಗಳು ದಿಟ್ಟ ನಿಲುವು ತೆಗೆದುಕೊಂಡಿದ್ದು, ಇದೀಗ ಬಿಹಾರ್ದಲ್ಲಿ ಕೂಡ ಮದ್ಯಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ, ಬೇರೆ ರಾಜ್ಯಗಳಿಂದ ಬರುವವರು ಮದ್ಯ ನಿಷೇಧಿಸಿರುವುದರಿಂದ ಸಮಸ್ಯೆಯಾಗುತ್ತದೆ ಅಂದರೆ ಬಿಹಾರಕ್ಕೆ ಬರಲೇಬೇಡಿ. ನೀವು ಬಿಹಾರಕ್ಕೆ ಬರುವ ಅಗತ್ಯವಿಲ್ಲ ಎಂದಿದ್ದಾರೆ.
ನಮ್ಮ ರಾಜ್ಯಕ್ಕೆ ಭೇಟಿ ನೀಡುವವರು ಮದ್ಯ ಸೇವನೆಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನಾವು ಅವರಿಗೆ ಮದ್ಯಪಾನ ಮಾಡಲು ಅವಕಾಶ ನೀಡಲಾಗದು. ಆದ್ದರಿಂದ ಮದ್ಯ ಕುಡಿಯಲೇಬೇಕು ಎಂದರೆ ಬಿಹಾರಕ್ಕೆ ಬರಲೇಬೇಡಿ ಎಂದು ಹೇಳಿದ್ದಾರೆ.
ಇನ್ನು ಬಿಹಾರಕ್ಕೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ತಮಗೆ ಮದ್ಯ ನಿಷೇಧ ಕಾನೂನನ್ನು ಸಡಿಲಗೊಳಿಸುವ ಬಗ್ಗೆ ಕೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಎಚ್ಚರಿಕೆ ನೀಡಿದ್ದಾರೆ.