ಭೋಪಾಲ್, ಡಿ. 27 (DaijiworldNews/HR): 40 ರಿಂದ 50 ವಯೋಮಾನದ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಭಾವಿತರಾಗುವುದು ಹೊರತು ಜೀನ್ಸ್ ತೊಟ್ಟು ಮೊಬೈಲ್ ಇಟ್ಕೊಳೋ ಯುವತಿಯರು ಅಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಹಾಗೂ ಜೀನ್ಸ್ ತೊಟ್ಟ ಯುವತಿಯರ ಬಗ್ಗೆ ಮಾತನಾಡಿ ಭಾರಿ ವಿವಾದವನ್ನು ಸೃಷ್ಟಿಸಿದ್ದು, ಈ ಬಗ್ಗೆ ಬಿಜೆಪಿ ಕೆಂಡಾಮಂಡಲವಾಗಿದೆ.
ಇನ್ನು ದಿಗ್ವಿಜಯ ಸಿಂಗ್ ಅವರು ವಯಸ್ಸಿನೊಂದಿಗೆ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದು, ಅವರು ಮಹಿಳೆಯರ ಬಗ್ಗೆ ಈ ಕೆಳಗಿನ ಮಟ್ಟದ ಆಲೋಚನೆ ಹೊಂದಿದ್ದಾರೆ. ಅವರಿಗೆ ಈಗ ಹುಚ್ಚು ಹಿಡಿದಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.