ನವದೆಹಲಿ, ಡಿ. 27 (DaijiworldNews/HR): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜನತಾ ದಳನ ರಾಜ್ಯಸಭಾ ಸಂಸದ ಮತ್ತು ಕೈಗಾರಿಕೋದ್ಯಮಿ ಮಹೇಂದ್ರ ಪ್ರಸಾದ್(81) ಅವರು ಮೃತಪಟ್ಟಿದ್ದಾರೆ.
ಪ್ರಸಾದ್ ಬಿಹಾರದಿಂದ ಏಳು ಬಾರಿ ರಾಜ್ಯಸಭಾ ಸಂಸದರಾಗಿದ್ದರು ಮತ್ತು ಒಮ್ಮೆ ಲೋಕಸಭೆಗೆ ಚುನಾಯಿತರಾಗಿದ್ದರು.
1980 ರಲ್ಲಿ ಪ್ರಸಾದ್ ಅವರು ಕಾಂಗ್ರೆಸ್ ಟಿಕೆಟ್ನಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಚುನಾಯಿತರಾಗಿದ್ದು, ಬಳಿಕ ರಾಜ್ಯದಲ್ಲಿ ಕೈ ಬಲ ಕ್ಷೀಣಿಸಿದ ಕಾರಣ ಜನತಾ ದಳ ಸಂಯುಕ್ತ ಪಕ್ಷಕ್ಕೆ ಸೇರಿದ್ದರು.
ಇನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅರಿಸ್ಟೋ ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕ ಪ್ರಸಾದ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ನಿಧನವು ಉದ್ಯಮದ ಜೊತೆಗೆ ಸಮಾಜ ಮತ್ತು ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ.