ನವದೆಹಲಿ, ಡಿ 27 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಸಂದರ್ಭ ‘ಪರೀಕ್ಷಾ ಪೇ ಚರ್ಚಾ’ವನ್ನು 2018ರಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಈ ಬಾರಿಯೂ ಆಸಕ್ತ ವಿದ್ಯಾರ್ಥಿಗಳು ಪ್ರಧಾನಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಳ್ಳಬಹುದು . ಪರೀಕ್ಷಾ ಪೆ ಚರ್ಚಾ ಎಂಬುದು ವಾರ್ಷಿಕ ಕಾರ್ಯಕ್ರಮವಾಗಿದ್ದು, ಬೋರ್ಡ್ ಪರೀಕ್ಷೆಗಳಿಗೆ ಮುಂಚಿತವಾಗಿ ಪಿಎಂ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ. ಇದರ ನೋಂದಣಿ ಪ್ರಕ್ರಿಯೆ ನಾಳೆ ಡಿಸೆಂಬರ್ 28 ರಂದು ಪ್ರಾರಂಭವಾಗಲಿದೆ.
ಸಂವಾದದ ಸಮಯದಲ್ಲಿ, ಪಿಎಂ ಮೋದಿ ಅವರು ರಾಷ್ಟ್ರದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ಪರೀಕ್ಷೆಯ ಒತ್ತಡ ಮತ್ತು ಸಂಬಂಧಿತ ವಿಷಯಗಳ ಕುರಿತು ಅವರ ಗೊಂದಲಗಳನ್ನು ಪರಿಹರಿಸುತ್ತಾರೆ .
9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಜೊತೆಗೆ, ಪಾಲಕರು ಸಹ ಪರೀಕ್ಷಾ ಪೆ ಚರ್ಚಾದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಪರೀಕ್ಷಾ ಪೆ ಚರ್ಚಾ ದಿನಾಂಕ ಮತ್ತು ಸಮಯವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಪರೀಕ್ಷಾ ಪೆ ಚರ್ಚಾದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಾಳೆಯಿಂದ mygov.in ನಲ್ಲಿ ನೋಂದಾಯಿಸಿಕೊಳ್ಳಬಹುದು.ಕಳೆದ ವರ್ಷ ಏಪ್ರಿಲ್ 7 ರಂದು ಪರೀಕ್ಷಾ ಪೆ ಚರ್ಚಾ ನಡೆದಿತ್ತು. ಡಿಸೆಂಬರ್ 28 ರಿಂದ ಜನವರಿ 20 ರವರೆಗೆ ನೋಂದಣಿಗೆ ಅವಕಾಶವಿರಲಿದೆ.
ಪರೀಕ್ಷಾ ಪೇ ಚರ್ಚಾಗೆ ಆಯ್ಕೆ ಹೇಗೆ?
‘ಪರೀಕ್ಷಾ ಪೇ ಚರ್ಚಾ’ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಕೆಲವು ಆನ್ಲೈನ್ ಸ್ಪರ್ಧೆಗಳನ್ನು ಆಧರಿಸಿರುತ್ತದೆ. ವಿಜೇತರು ನೇರವಾಗಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯುತ್ತಾರೆ. ಈ ವಿಶೇಷ ವಿಜೇತರು ತಮ್ಮ ಹಸ್ತಾಕ್ಷರದ ಛಾಯಾಚಿತ್ರದ ಡಿಜಿಟಲ್ ಸ್ಮರಣಿಕೆಯನ್ನು ಪಡೆಯುತ್ತಾರೆ. ಅವರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನೂ ನೀಡಲಾಗುವುದು.